Haridasa Sahitya — Vyasadasa
Dinanadenu nanu
ದೀನನಾದೆನು ನಾನು ಅನಾಥನಾದೆನು
Composer: Haridasa · Deity: Sri Raghavendra Theertharu · Genre: Dasara Pada
Kannada lyrics
ದೀನನಾದೆನು ನಾನು ಅನಾಥನಾದೆನು || PA || ದೀನರಕ್ಷಕ ಗುರು ರಾಘವೇಂದ್ರನೆ ಕಾಯೋ || A PA || ಆದರಿಸುವದಿಲ್ಲ ಆಧಾರವೆನಗಿಲ್ಲ ಆಧಿವ್ಯಾಧಿಗಳೆನ್ನ ಭಾದಿಸುತಿವೆಯಲ್ಲ ವೇದನೆ ಪಡುತಿಹೆ ಹಾದಿ ತೋರದು ಎನಗೆ ವೇದಾಂತವೇದ್ಯನೆ ಪಾದಸ್ಮರಣೆ ನೀಡೋ || 1 || ಕಾಯವು ದಣಿಯಿತು ಕಾಯುವರಾರಿಲ್ಲ ಕಾಯಲಾರೆನು ಸ್ವಾಮಿ ಕಾಯವು ಸ್ಥಿರವಲ್ಲ ಮಯಾಪಾಶದಿ ನಾನು ಭಯವ ಹೊಂದಿಹೆನಯ್ಯ ಕಾಯಜಪಿತನಂಘ್ರಿ ತೋರಿ ಕಾಯೈಎನ್ನ || 2 || ತುಚ್ಚದೇಹಕ್ಕಾಗಿ ವೆಚ್ಚ ಮಾಡಿದೆ ಕಾಲ ಸ್ವಚ್ಚಮನದಿ ನಿನ್ನ ಅರ್ಚಿಸದೆ ಕೆಟ್ಟೆ ಕಿಚ್ಚಿನೊಳಗಣ ಕೀಟದಂದದಿ ಬೆಂದಿಹೆ ಅಚ್ಯುತ ಸಿರಿಕೃಷ್ಣವಿಠಲನಂಘ್ರಿಯ ತೋರೋ || 3 ||
Transliteration
Dinanadenu nanu anathanadenu || p || Dinarakshaka gururagavendrane kayo || A. Pa || Adarisuvudilla adharavenagilla | Adhivyadhigalenna badhisuttiveyalli | Hadi toradu enage vedane padutihe | Vedantavedyane pada smarane nido || 1 || Kayavu daniyitu kayuvavarilla | Kayalareno svami kayavu sthiravalla | Mayapasadi nanu Bayava hondihenayya | Kayajapitanangri tori kayai enna || 2 || Tucca dehakkagi vec…