Haridasa Sahitya — Vyasadasa

Dhavala gangeya gangadhara

ಧವಳಗಂಗೆಯ ಗಂಗಾಧರ ಮಹಾಲಿಂಗ

Composer: Vadirajaru · Deity: Shiva / Rudra Devaru · Genre: Dasara Pada

Kannada lyrics

ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ ಧವನ ತೋರಿಸಯ್ಯಾ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗಭೀಷ್ಟವ ಕೊಡುವ ಹೆಚ್ಚಿನ ಅಘಗಳ ತರಿದು ಬಿಸುಟುವ ದುಶ್ಚರಿತಗಳೆಲ್ಲ ದೂರದಲ್ಲಿಡುವ ನ ಮ್ಮಚ್ಯುತಗಲ್ಲದ ಅಸುರರ ಬಡಿವ || ೧ || ಮಾರನ ಗೆದ್ದ ಮನೋಹರ ಮೂರ್ತಿ ಸಾರ ಸಜ್ಜನರಿಗೆ ಸುರ ಚಕ್ರವರ್ತಿ ಧಾರಿಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮು ರಾರಿಯ ತೋರಯ್ಯಾ ನಿಮಗೆ ಶರಣಾರ್ತಿ || ೨ || ಚೆನ್ನ ಪ್ರಸನ್ನ ಶ್ರೀಹಯವದನನ್ನ ಅನುದಿನ ನೆನೆವಂತೆ ಮಾಡೋ ನೀ ಎನ್ನ ಅನ್ಯನಲ್ಲವೋ ನಾನು ಗುರುವೆಂಬ ನಿನ್ನ ಇನ್ನಾದರು ಹರಿಯ ತೋರೊ ಮುಕ್ಕಣ್ಣ || ೩ ||

Transliteration

Dhavala gangeya gangadhara mahalinga madhavana Torisayya gurukulottunga || Arcisidavarigabhishtava koduva Hecchina aghagala varisi bisutuva Duscaritagalella duradalliduva Nammachyutagallada asurara badiva ||1|| Marana gedda manoharamurti Saro sajjanarige sura chakravarti Dharuniyolage tumbide ninna kirti Murariya torisayya ninage saranarthi||2|| Chenna prasanna sri hayavadananna Anudina nenevante…