Haridasa Sahitya — Vyasadasa

Dharanige doreyendu

ಧರಣಿಗೆ ದೊರೆಯೆಂದು

Composer: Purandara Dasaru · Deity: Hari · Genre: Bhakti

Kannada lyrics

ಧರಣಿಗೆ ದೊರೆಯೆಂದು ನಂಬಿದೆ ಇಂಥ ಪರಮಲೋಭಿ ಎಂಬುದರಿಯೆ ಶ್ರೀ ಹರಿಯೆ ।।ಪ॥ ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ ಓಡಿ ನೀರೊಳು ಸೇರಿಕೊಂಡೆ ಬೇಗ ಹೇಡಿಯ ತೆರದಲಿ ಮೋರೆಯ ತೋರದೆ ಓಡಿ ಅರಣ್ಯದಿ ಮೃಗಗಳ ಸೇರಿದೆ ।।೧।। ಬಡವರ ಬಿನ್ನಹ ಲಾಲಿಸದೆ ಹಲ್ಲ ಕಡು ಕೋಪದಲಿ ತೆರೆದಂಜಿಸಿದೆ ತಡೆಯದೆ ಭಿಕ್ಷುಕನಾದರೆ ಬಿಡರೆಂದು ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ ।।೨।। ಉತ್ತಮನೆಂದರೆ ಮತ್ತೆ ಚೋರನಾದೆ ಬತ್ತಲೆ ನಿಂತೆ ತೇಜಿಯನೇರಿದೆ ಎತ್ತಹೋದರು ಬಿಡೆ ಮತ್ತೆ ನಿನ್ನನು ದೇವ ಚಿತ್ತಜಜನಕ ಶ್ರೀ ಪುರಂದರವಿಠಲ ।।೩।।

Transliteration

Dharanige doreyendu nambide intha Paramalobi embudariye sri hariye ||pa|| Kadi beduvarige kodalarade anji Odi nirolu serikomde bega Hediya teradali moreya torade Odi aranyadi mrugagala seride ||1|| Badavara binnaha lalisade halla Kadu kopadali teredanjiside Tadeyade bikshukanadare bidarendu Kodaliya pididu kodaga hinda kayde ||2|| Uttamanendare matte coranade Battale ninte tejiyaneride Ettahodaru…