Haridasa Sahitya — Vyasadasa
Dhanyanade vithalana kandu
ಧನ್ಯನಾದೆ ವಿಠಲನ ಕಂಡು
Composer: Jagannatha Dasaru · Deity: Vitthala · Genre: Dasara Pada
Kannada lyrics
ಧನ್ಯನಾದೆ ವಿಠಲನ ಕಂಡು ।।ಪ।। ಧನ್ಯನಾದೆ ಕಾಮನಪಿತ ಲಾ ವಣ್ಯ ಮೂರಿತಿಯ ಕಣ್ಣಲ್ಲಿ ಕಂಡು ।।ಅ.ಪ।। ದೇವವರೇಣ್ಯ ಸದಾವಿನೋದಿ ವೃಂ ದಾವನಸಂಕಾರ ಗೋಪನ ಕಂಡು ।।೧।। ಮಂಗಳಾಂಗ ಕಾಳಿಂಗಮರ್ದನ ಮಾ ತಂಗವರದ ವರ ರಂಗನ ಕಂಡು ।।೨।। ಹಾಟಕಾಂಬರ ಕಿರೀಟಸಾರಥಿ ತಾಟಾಕಾರಿ ವೈರಾಟನ ಕಂಡು ।।೩।। ಚಿಂತಿತಫಲದ ಕೃತಾಂತನಾತ್ಮಜಾ ದ್ಯಂತರಹಿತ ನಿಶ್ಚಿಂತನ ಕಂಡು ।।೪।। ಮಾತುಳಾಂತಕ ವಿಧಾತಪಿತ ಜಗ ನ್ನಾಥವಿಠಲ ವಿಖ್ಯಾತನ ಕಂಡು ।।೫।।
Transliteration
Dhanyanade vithalana kandu ||pa|| Dhanyanade kamanapita la Vanya muritiya kannalli kandu ||a.pa|| Devavarenya sadavinodi vrun Davanasankara gopana kandu ||1|| Mangalanga kalingamardana ma Tangavarada vara rangana kandu ||2|| Hatakambara kiritasarathi Tatakari vairatana kandu ||3|| Chintitapalada krutantanatmaja Dyamtarahita niscimtana kandu ||4|| Matulantaka vidhatapita jaga Nnathavithala vikyatan…