Haridasa Sahitya — Vyasadasa

Devi ambujavalli ramanane

ದೇವಿ ಅಂಬುಜವಲ್ಲಿ ರಮಣನೆ

Composer: Gopala Dasaru · Deity: Bhu Varaha · Genre: Bhakti

Kannada lyrics

ದೇವಿ ಅಂಬುಜವಲ್ಲಿ ರಮಣನೆ । ಭೂವರಾಹ ದಯಾನಿಧೇ ॥ ಪವಮಾನನ ದಿವ್ಯ ಕರದಲಿ । ಸೇವೆ ಸಂತತ ಕೊಳ್ಳುವೆ ॥೧॥ ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ । ನೀ ವಿಹಾರವ ಮಾಡುವೆ ॥ ಭವವಿಮೋಚನ ಭಕ್ತವತ್ಸಲ । ಕವಿಗಳಿಗೆ ಕರುಣಾಕರ ॥೨॥ ಅತ್ಯಗಾಧ ಸುಶೀಲ ಜಾಹ್ನವಿ । ಸುತ್ತು ಷೋಡಶ ತೀರ್ಥದಿ ॥ ನಿತ್ಯ ಪುಷ್ಕರಿಣಿಯ ಗರ್ಭದಿ । ನಿತ್ಯ ಇರುವುದು ಕಂಡೆ ನಾ ॥೩॥ ಮತ್ತು ವರ್ಣಿಪೆ ತೀರ್ಥ ತಟದಲಿ । ಉತ್ತಮಾಗ್ನೇಯ ಭಾಗದಿ ॥ ಚಿತ್ತವೇದ್ಯದಿ ಕಲ್ಪತರು ಅ । ಶ್ವತ್ಥ ರೂಪದಿ ಇರುವನ ॥೪॥ ಕರಗಳೆರಡನು ಕಟಿಯಲಿಟ್ಟು । ಕೋರೆಹಲ್ಲನೆ ತೋರುತ ॥ ಧರಿಸಿ ಚಿನ್ಮಯ ಸಾಲಿಗ್ರಾಮದ । ಸರವು ಈ ಪರಿ ಬೆಳಗುತ ॥೫॥ ಘನ್ನ ಶ್ವೇತವರಾಹ ಮೂರುತಿ । ಎನ್ನ ಪೂರ್ವದ ಪುಣ…

Transliteration

Devi ambujavalli ramanane | Buvaraha dayanidhe || Pavamanana divya karadali | Seve santata kolluve ||1|| Avaniyolu srimushna kshetradi | Ni viharava maduve || Bavavimocana Baktavatsala | Kavigalige karunakara ||2|| Atyagadha susila jahnavi | Suttu shodasa tirthadi || Nitya pushkariniya garbadi | Nitya iruvudu kande na ||3|| Mattu varnipe tirtha tatadali | Uttamagneya bagadi || Cittavedyadi kalpata…