Haridasa Sahitya — Vyasadasa

Deva thraahi gopaala krishna

ದೇವ ತ್ರಾಹಿ ಗೋಪಾಲಕೃಷ್ಣ ದೇವ

Composer: Haridasa · Deity: Krishna · Genre: Dasara Pada

Kannada lyrics

ದೇವ ತ್ರಾಹಿ ಗೋಪಾಲಕೃಷ್ಣ ದೇವ ತ್ರಾಹಿ ||pa|| ದೇವ ತ್ರಾಹಿ ದಯಯಾ ವನಚತುರ ನಿರಾವರಣಾಖಿಲ ಭಾವಭರಿತ ನಿಜಪಾವನ ಭಕ್ತಜನಾವಳಿಸಂವೃತ ಭಾವಜಜನಕ ||a.pa|| ನಿರ್ಗುಣ ನಿರುಪಮ ದುರ್ಗಮಗುಣಗಣ ನರ್ಗಳಾವಾಸನಾ ನಿರ್ಗಮಹೇತ್ವಪವರ್ಗದ ಕೃಷ್ಣಾ ||1|| ಇಂದಿರಾ ಮುನಿ ಮನೋಮಂದಿರ ವಿನತಾ ನಂದನವಾಹನ ಕುಂದರದನ ಕುರು ನಂದನ ಸೇನಾ ವೃಂದನಿಷೂದನ ನಂದನ ಕೃಷ್ಣಾ ||2|| ಅರ್ಜುನಪಾಲಕ ದುರ್ಜನಶಿಕ್ಷಕ ಸಜ್ಜನರಕ್ಷಕ ಭರ್ಜಿತಕರ್ಮ ಸುದುರ್ಜಯ ಮೋಕ್ಷದನಿರ್ಜರ ತಿರುಪತಿ ನಿರ್ಜಿತ ವೆಂಕಟಕೃಷ್ಣ ||3||

Transliteration

Deva trahi gopalakrushna deva trahi ||pa|| Deva trahi dayaya vanachatura niravaranakila Bavabarita nijapavana baktajanavalisamvruta bavajajanaka || a.pa|| Nirguna nirupama durgamagunagana Nargalavasana nirgamahetvapavargada krushna||1|| Indira muni manomandira vinata Nandanavahana kundaradana kuru Nandana sena vrundanishudana nandana krushna ||2|| Arjunapalaka durjanasikshaka sajjanarakshaka Barji…