Haridasa Sahitya — Vyasadasa

Deva banda namma svami bandano

ದೇವ ಬಂದ ನಮ್ಮ ಸ್ವಾಮಿ ಬಂದನೊ

Composer: Purandara Dasaru · Deity: Hari · Genre: Bhakti

Kannada lyrics

ದೇವ ಬಂದ ನಮ್ಮ ಸ್ವಾಮಿ ಬಂದನೊ ದೇವರ ದೇವ ಶಿಖಾಮಣಿ ಬಂದನೊ ||pa|| ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ ||a.pa|| ಮಂದರೋದ್ದರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೊ ||1|| ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||2|| ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದನೊ ||3|| ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಠಲ ಬಂದನೊ||4|| Deva banda namma svami bandano Devara deva sikamani bandano ||pa||

Transliteration

Uragasayana banda garudagamana banda Naragolidava banda narayana banda ||a.pa|| Mandaroddara banda mamanohara banda Brundavanapati govinda bandano ||1|| Nakraharanu banda cakradharanu banda Akruragolida trivikrama bandano||2|| Pakshivahana banda lakshmanagraja banda Akshaya Palada sri lakshmiramana bandano ||3|| Nigamagocara banda nityatruptanu banda Nagemuka purandaravithala bandano||4||