Haridasa Sahitya — Vyasadasa
De De adyaane
ಡೀ ಡೀ ಅಡೋನೆ
Composer: Vijaya Dasaru · Deity: Hari · Genre: Bhakti
Kannada lyrics
ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ | ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು ||pa|| ಮರಕತ ನವರತ್ನ ವಜ್ರ | ಹರಳು ತೆತ್ತಿಸಿದ ದ್ಯುಮಣಿ || ಕಿರಣ ಮುಕುಟ ಧರಿಸಿದ ಶಿರದಲಿ | ಸರಿ ಸರಿ ಸರಿ ಸರಿ ಹಾಯಿದು ||1|| ಚಂದ್ರಶೇಖರ ಹಂಸವಾಹನ| ಇಂದ್ರಾದ್ಯರಾಕಾಶದಲಿ ಧುಂ ಧುಂ || ಧುಂ ಧುಂ ದುಂದುಭಿ ನುಡಿಸೆ | ಬಂದೆ ಇಕ್ಕೋ ಬಂದೆ ಬಂದೆನುತ ||2|| ಪಿಂತಿರುಗಿ ಪೋಗಿ ನೀನು | ಅಂತರಿಸಿ ದೂರದಿಂದ || ನಿಂತು ವಿಜಯವಿಠ್ಠಲರೇಯಾ | ಇತ್ತಿಂ ತ್ತಿಂ ತ್ತಿಂ ತ್ತಿಂ ತ್ತಿಂ ತ್ತೆನುತಲಿ ||3||
Transliteration
De de adyaane ranga| de de adyaane| Odi odi bandhu galige de de de de de de ditthu|| magara navarathna kundala haralu katthisidha kachidha mukuta siradhalli dharisi siri siri siriyendhu||1|| chandrasekara hamsa vahana indraadhyar aakashadhalli dhum dhum dhum dhum thudisi ikko bandhe bandhenutha||2|| thirugi thirugi bandhu neenu karadhindha andharisi dheera vijaya vittala reya dheem dheem dheem dhe…