Haridasa Sahitya — Vyasadasa
Dayamadu dayamadu enna mele
ದಯಮಾಡು ದಯಮಾಡು ಎನ್ನ ಮೇಲೆ
Composer: Vijaya Dasaru · Deity: Hari · Genre: Bhakti
Kannada lyrics
ದಯಮಾಡು ದಯಮಾಡು ಎನ್ನ ಮೇಲೆ | ಅಂತರಂಗದೊಳಿಪ್ಪ ಅಚ್ಚುತಮೂರ್ತಿ ||pa|| ಗಂಧ ಪರಿಮಳ ಕುಸುಮ ಜಾಜಿ ಮಲ್ಲಿಗೆ ಮಾಲೆ | ಮಂದಾರ ಹಾರ ಕೊರಳೊಳಿಡಲೂ || ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ | ಹಂದಿಯಂದದಿ ಇಲ್ಲಿ ಇಪ್ಪ ನರಗೆ || 1|| ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ | ಹೆತ್ತತಾಯಿ ತಂದು ಉಣ್ಣ ಬಡಿಸಲು || ಅತ್ತ ಮೊಗವಗಬೆ ತೊತ್ತು ಉಣಬಡಿಸಿದ | ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ||2|| ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು | ಅಂಬಿಗ ತಡೆಯದೆ ದಾಟಿಸಲು || ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ | ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ||3||
Transliteration
Dayamadu dayamadu enna mele Antarangadolippa acyuta murti ||pa|| Gandha parimala kusuma jati mallige male Mandara hara koralolidalu Chandavillavendu tegedu bisati Ura Handiyandadi illi ippa narage ||1|| Hettatuppa sannasavige paramanna Hettatayi tandu unnabadisalu Atta mogavagaci tottu unabadisida Hottu Ogara tindu ippenemba narage ||2|| Tumbida holeyalli harigolittukondu Ambiga tadeyade datisalu…