Haridasa Sahitya — Vyasadasa

Dayamaadi salahayya

ದಯಮಾಡಿ ಸಲಹಯ್ಯ

Composer: Sripadarajaru · Deity: Vishnu · Genre: Dasara Pada

Kannada lyrics

ದಯಮಾಡಿ ಸಲಹಯ್ಯ ಭಯನಿವಾರಣನೆ ಹಯವದನ ನಿನ್ನ ಚರಣ ನಂಬಿದೆನೊ ಜೀಯ ||ಪ|| ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗಳನು ಎಣಿಸಲಳವಲ್ಲ ಅಷ್ಟಿಷ್ಟು ಎಂದು ಫಣಿಶಾಯಿ ನೀನೆನ್ನ ಅವಗುಣಗಳೆನಿಸದೆ ನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ ||೧|| ಕಂಡ ಕಂಡ ಕಡೆಗೆ ಪೋಪ ಚಂಚಲ ಮನವು ಪಿಂಡ ತಿಂಬಲ್ಲಿ ಬಹು ನಿಷ್ಠ ತಾನು ಭಂಡಾಟದವನೆಂದು ಬಯಲಿಗೆ ತಾರದೆ ಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ ||೨|| ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆ ಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯ ವಾತಜನ ಪರಿಪಾಲ ಶ್ರೀರಂಗವಿಠಲ ||೩||

Transliteration

Dayamaadi salahayya | bhaya nivaarane | hayavadana ninna charana nambideno jeeyaa || pa || Kshana kshanake naa maadidantha paapangalannu | enisalalavalla ashtishtu endu || phanishaayi neenenna avagunagalenisade | nenehinaatura kottu daasanendenisayya || 1 || Kanda kanda kadege popa chancala manavu | pinda timbuvalli bahunishtha naanu | bhandaatadavanendu bayalige taarade | kondaaduvante bhakutiya…