Haridasa Sahitya — Vyasadasa

Dayadore deva

ದಯ ತೋರೋ ದೇವ ಗುರು ರಾಜನೇ |

Composer: Haridasa · Deity: Sri Raghavendra Theertharu · Genre: Dasara Pada

Kannada lyrics

ದಯ ತೋರೋ ದೇವ ಗುರು ರಾಜನೇ ಭಯವಾಗುದೆನಗೆ ಭವಸಾಗರದಿ ।। (ದಯ ತೋರೋ ) ಮೋಹಜಾಲದಲ್ಲಿ ಮಂದಬುದ್ಧಿಯಾಗಿ ದೇಹಕೊರಗಿತಯ್ಯ ರಾಘವೇಂದ್ರ ರಾಯ ।। (ದಯ ತೋರೋ) ಅನ್ನ ವಸ್ತ್ರಕ್ಕಾಗಿ ಅನ್ಯ ದಾಸನಾಗಿ ಬನ್ನಬಡುಕಿಹೆನು ಚನ್ನ ವ್ಯಾಸರಾಯ ಗುರು ರಾಜನೇ ।। (ದಯ ತೋರೋ ) ಹಠವೇಕೆ ಜೀಯ ದಿಠಯೋಗ ಕಾಯ .... ವಿಠಲೇಶ ಪ್ರಿಯ ಪ್ರಹ್ಲಾದ ರಾಯ ।। (ದಯಾ ತೋರೋ )

Transliteration

Dayedoro deva gururajane | Bayavadudenage bavasagadagi || pa || Moha jaladalli manda buddhiyagi | Deha koragitayya ragavendraraya || 1 || Anna vastrakkagi anya dasanagi | Bannabattenayya Ganna vyasaraya || 2 || Hathaveke jiya dita yogakaya | Vithalesapriya prahladaraya || 3 ||