Haridasa Sahitya — Vyasadasa

Daya virali daya Damodara

ದಯವಿರಲಿ ದಯವಿರಲಿ ದಾಮೋದರ

Composer: Gopala Dasaru · Deity: Krishna / Govinda / Mukunda · Genre: Bhakti

Kannada lyrics

ದಯವಿರಲಿ ದಯವಿರಲಿ ದಾಮೋದರ ।।ಪ॥ ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ ।।ಅ.ಪ॥ ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ ಸಾಗುವವನಲ್ಲನಾ ನಿನ್ನ ಬಿಟ್ಟು ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದು ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।।೧।। ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ- ಸಾಧ್ಯ ನಿನಗೆಂದು ನಾ ಬಂದವನಲ್ಲ ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ।।೨।। ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ ಅತಿಶಯವು ಉಂಟು ವಿಭೂತಿಯಲ್ಲಿ ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ ।।೩।। ನೋಡಿದೆನೆ ನಾ ನಿನ್ನ ನೋಡದೆ ಎಂದೆ…

Transliteration

Dayavirali dayavirali damodara ||pa|| Sayavagi bidadenna sakuva srikrashna ||a.pa|| Hogi baruvenayya hoda hangella Saguvavanallana ninna bittu Tugi tottilu konege sthaladalle nilluvudu Hyage ni nadedante hage na nadakombe ||1|| Iddalle ennanuddharipa Sakti a- Sadhya ninagendu na bandavanalla Nadyadi kshetramurtigalallli nija j~jana Vruddha janara huduki ninna tiliyalu bande ||2|| Satata iddalle en…