Haridasa Sahitya — Vyasadasa

Dasara pada on Sathya Bodha Theertharu

ಭಕುತಿ ಪಾಲಿಸೊ ವಿರಕ್ತಿ ಕರುಣಿಸೊ

Composer: Mohana Dasaru · Deity: Satyabodha Teertharu · Genre: Bhakti

Kannada lyrics

ಭಕುತಿ ಪಾಲಿಸೊ ವಿರಕ್ತಿ ಕರುಣಿಸೊ ||pa|| ಸತ್ಯಪ್ರೀಯಾ ತೀರ್ಥಕರಜ ಸತ್ಯಬೋಧ ಗುರುವರೇಣ್ಯ||a.pa|| ಪೃಥ್ವಿಜಾವಲ್ಲಭನ ಪಾದ ನಿತ್ಯ ಪೂಜಿಸುತಲಿ ಜಗದಿ ಮತ್ತಮಾಯಿ ಗಜಕುಲ ಪಂಚ ವಕ್ತ್ರರೆನಿಸಿ ಮೆರೆದ ಗುರುವೆ||1|| ನಂದತೀರ್ಥಮತ ಪಯೋಬ್ಧಿ ಚಂದ್ರ ಸದೃಶರೆನಿಸಿ ಸತತ ನಂದ ಶಾಸ್ತ್ರ ಬೋಧಿಸಿ ಬುಧ ವೃಂದಕೆ ಆನಂದಗರೆದಿ ||2|| ಇರುಳುಕಾಲದಲ್ಲಿ ನಭದಿ ತರಣಿಬಿಂಬ ತೋರಿದಂಥ ಪರಮ ಮಹಿಮ ನಿಮ್ಮಯ ಶುಭ ಚರಣ ಸ್ಮರಣೆ ಕರುಣಿಸೆನಗೆ ||3|| ಕೋನೇರಿಯಾಚಾರ್ಯರು ನಿಮ್ಮ ಕಾಣುತ ತೀರ್ಥವನು ಕೊಂಡು ವಾನರ ದೇಹವನು ತ್ಯಜಿಸಿಸುಸ್ಥಾನ ಗತಿಯ ಪಡೆದರು ಜವ ||4|| ಶರಣು ಜನರ ಪೊರಿವ ‘ ಕಾರ್ಪರ ನರಹರಿ’ ಪದದಿಂದ ಜನಿತ ಸುರನದಿ ನಿಮ್ಮಯ ಬಳಿಗೆ ಬಂದ…

Transliteration

Bakuti pAliso virakti karuNiso ||pa|| satyaprIyA tIrthakaraja satyabOdha guruvarENya||a.pa|| pRuthvijAvallaBana pAda nitya pUjisutali jagadi mattamAyi gajakula panca vaktrarenisi mereda guruve||1|| nandatIrthamata payObdhi chandra sadRuSarenisi satata nanda SAstra bOdhisi budha vRundake Anandagaredi ||2|| iruLukAladalli naBadi taraNibiMba tOridantha parama mahima nimmaya SuBa caraNa smaraNe karuNi…