Haridasa Sahitya — Vyasadasa

Dasara pada on Prasanna venkata dasaru

ಸಿರಿವಿರಿಂಚಿ ಭವೇಂದ್ರಾದಿ ಸುರರಿಂದ ರ್ಚಿತನಾದ ಸಿರಿ

Composer: Haridasaru · Deity: Prasanna Venkata Dasaru · Genre: Dasara Pada

Kannada lyrics

ಸಿರಿವಿರಿಂಚಿ ಭವೇಂದ್ರಾದಿ ಸುರರಿಂದ ರ್ಚಿತನಾದ ಸಿರಿ ಪ್ರಸನ್ನವೆಂಕಟನ್ನ|| ನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ||pa|| ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳು ದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲು ಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲು ತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು ||1|| ಹಸನಾಗಿ ಕಪಿಲ ತೀರ್ಥದಲಿ ಮಜ್ಜನಗೈದು ಶಶಿಧರನ ಅಡಿಗಳಿಗೆರಗಿ ಎಸೆವ ಪರ್ವತಾರೋಹಣವ ಮಾಡಿ ಸ್ವಾಮಿ ಪುಷ್ಕರಣಿ ತೀರ್ಥದಲಿಮುಳುಗಿ ಬಿಸಜದಾಳಾಕ್ಷ ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿ ಝಷಕೇತು ಜ…

Transliteration

Sirivirinchi bhavendradi Suririndarchitanaad siri Prasannavenkatanna || Nirutsmaripakakhandaki Venkappanavar Charanvane Nenevane Dhanyamanya || Pa || Marutamatabdhi bhusurmara kat janmadharnagi bhuviyolludisalu | Tarullatva kalledu tarunatanabaralinnu arrive kannade iratiralu Harina – Mavalligalla baredu oduva bhagya aritenedara Baradiralu Toredu maneyavara giriyatre mallvarnusarasi teralli baruti…