Haridasa Sahitya — Vyasadasa

Rayara nodirai mahipatirayara padirai

ರಾಯರ ನೋಡಿರೈ ಮಹಿಪತಿರಾಯರ ಪಾಡಿರೈ

Composer: Bhoopati Vitthala Dasaru · Deity: Sri Mahipati Dasaru · Genre: Bhakti

Kannada lyrics

ರಾಯರ ನೋಡಿರೈ ಮಹಿಪತಿರಾಯರ ಪಾಡಿರೈ ||pa|| ರಾಯರ ನೋಡುತ ಪಾಡುತ ಭಕುತಿಯ ಮಾಡಲು ಬೇಡಿದ ವರಗಳ ಕೊಡುವಾ |a.pa|| ತಂದೆಯ ನೋಡಿರೈ ಮ’ಪತಿಕಂದನ ಪಾಡಿರೈ ಕುಂದಗಳೆಣಿಸದೆ ಬಂದು ಭಕುತಜನ ವೃಂದವ ಪೊರೆಯುವ ತಂದೆ ಮ’ಪತಿ ||1|| ಭೋಗಿಯ ನೋಡಿರೈ ತಾಪಸಯೋಗಿಯ ಪಾಡಿರೈ ತ್ಯಾಗರಾಜ ಭೂಪತಿ’ಠ್ಠಲಪ್ರಿಯ ಭೋಗಿಭೂಷಣಾಂಕ ವೈಷ್ಣವಾಗ್ರಣಿ ||2|

Transliteration

Rayara nodirai mahipatirayara padirai || pa || Rayara noduta paduta Bakutiya | Madalu bedida varagala koduva || apa || Tamdeya nodirai mahipati kandana padirai | Kumdugalenisade bandu Bakuta jana | Vrumdava poreyuva tande mahipati || 1 || Bogiya nodirai tamasa yogiya padirai | Tyagaraja bupativiththala priya | Bogi bushananka vaishnavagrani ||2 ||