Haridasa Sahitya — Vyasadasa
Dasadasara maneya dasanudasa nanu
ದಾಸದಾಸರ ಮನೆಯ ದಾಸಾನುದಾಸ ನಾನು
Composer: Kanakadasaru · Deity: Hari · Genre: Vairagya
Kannada lyrics
ದಾಸದಾಸರ ಮನೆಯ ದಾಸಾನುದಾಸ ನಾನು ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ।।ಪ॥ ಶಂಕುದಾಸರ ಮನೆಯ ಮಂಕುದಾಸನು ನಾನಯ್ಯ ಮಂಕುದಾಸನು ನಾನು ಮರುಳದಾಸ ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದ ಬಾಗಿಲ ಕಾಯ್ವ ಬಡದಾಸ ನಾನು ।।೧।। ಕಾಳಿದಾಸರ ಮನೆಯ ಕೀಳುದಾಸನು ನಾನಯ್ಯ ಆಳುದಾಸನು ನಾನು ಮೂಳದಾಸ ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ ಆಳಿನಾಳಿನ ದಾಸನಡಿದಾಸ ನಾನಯ್ಯ ।।೨।। ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ ಕುಲವಿಲ್ಲದ ದಾಸ ಕುರುಬದಾಸ ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗದಾಸ ಸಲೆ ಮುಕ್ತಿ ಪಾಲಿಸೆನ್ನೊಡೆಯ ಆದಿಕೇಶವರಾಯ ।।೩।।
Transliteration
Dasadasara maneya dasanudasa nanu Srisa sriranga nimma maneya dasa ||pa|| Sankudasara maneya mankudasanu nanayya Mankudasanu nanu maruladasa Sankirtaneya madi neneva Baktara maneya Binkada bagila kayva badadasa nanu ||1|| Kalidasara maneya kiludasanu nanayya Aludasanu nanu muladasa Palakshasaka ninna Bajipa Baktara maneya Alinalina dasanadidasa nanayya ||2|| Halavu dasara maneya holedasa nanayya K…