Haridasa Sahitya — Vyasadasa
Dari yavudayya vaikunthake dari torisayya
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ
Composer: Purandara Dasaru · Deity: Hari · Genre: Bhakti
Kannada lyrics
ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ||pa|| ದಾರಿ ಯಾವುದಯ್ಯ ದಾರಿ ತೋರಿಸಯ್ಯ ಆ- ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ||a.pa|| ಬಲು ಭವದನುಭವದಿ ಕತ್ತಲೆಯೊಳು ಬಲು ಅಂಜುತೆ ನಡುಗಿ ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೊಳೆವಂಥ ದಾರಿಯ ತೋರೊ ನಾರಾಯಣ||1|| ಪಾಪ ಪೂರ್ವದಲ್ಲಿ ಮಾಡಿದುದಕೆ ಲೇಪವಾಗಿದೆ ಕರ್ಮ ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ ಶ್ರೀಪತಿ ಸಲಹೆನ್ನ ಭೂಪನಾರಾಯಣ||2|| ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ ನಿನ್ನ ದಾಸನಾದೆನೊ ಪನ್ನಗಶಯನ ಶ್ರೀ ಪುರಂದರವಿಠಲ ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ||3|| Dari yavudayya vaikunthake dari torisayya||pa||
Transliteration
Dari yavudayya dari torisayya A- Dhara muruti ninna pada seruvudakke||a.pa|| Balu bavadanubavadi kattaleyolu Balu anjute nadugi Balalutta tirugide hadiya kanade Holevantha dariya toro narayana||1|| Papa purvadalli madidudake Lepavagide karma I pariyindali ninna nenesikombe Sripati salahenna bupanarayana||2|| Innu na janisalare bumiya mele Ninna dasanadeno Pannagasayana sri purandaravithala Innu pu…