Haridasa Sahitya — Vyasadasa

Daniya nodidhano venkatana

ಧಣಿಯ ನೋಡಿದೆನೋ ವೆಂಕಟನ

Composer: Purandara Dasaru · Deity: Srinivasa / Venkatesha · Genre: Bhakti

Kannada lyrics

ಧಣಿಯ ನೋಡಿದೆನೋ ವೆಂಕಟನ , ಮನ- ದಣಿಯೆ ನೋಡಿದೆ ಶಿಖಾಮಣಿ ತಿರುಮಲನ || ಚರಣದಂದುಗೆ ಗೆಜ್ಜೆಯವನ , ಪೀತಾಂ- ಬರ ಉಡಿಗೆ ಒಡ್ಯಾಣವಿಟ್ಟವನ ಮೆರೆಯುವ ಮಾಣಿಕ್ಯದವನ , ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿದವನ || ಕೊರಳೊಳು ವೈಜಯಂತಿ ಇಹನ , ಕಿರು ಬೆರಳ ಮುದ್ರಿಕೆ ಭುಜಕೀರ್ತಿಲೊಪ್ಪುವನ ಅರಳುಕಂಗಳ ನೋಟದವನ , ಸುಳಿ- ಗುರುಳು ನೊಸಲು ಪಟ್ಟಿ ನಾಮ ಹಚ್ಚಿಹನ || ಶಂಖಚಕ್ರವ ಪಿಡಿದವನ , ಕೈ- ಕಂಕಣ ತೋಳ್ಬಂದಿ ಬಾಪುರಿಯವನ ಶಂಖನೂದುವ ಸರ್ವೋತ್ತಮನ , ಭೂ – ವೈಕುಂಠವಿದೆಂದು ಹಸ್ತದಿ ತೋರಿಸುವನ || ಕೇಸಕ್ಕಿ ಅನ್ನ ಉಂಬುವನ , ಬಡ್ಡಿ ಕಾಸು ಬಿಡದ ಹಾಗೆ ಕೂಡಿ ಹಾಕುವನ ಘೋಷಾನಾದಕ್ಕೆ ಒಲಿದಿಹನ , ಮೈಯೊಳ್ ಸೂಸುವ ಗಂಧ ಕಸ್ತೂರಿ ಲೇಪಿತ…

Transliteration

Daniya nodidhano venkatana mana Daniya nodide shikamani tirumalana || Kesakki annava unbuvana baddi Kasu bidade honna galisuvana Dose annava marisuvana tanna Dasara myaladi kunidadutihana ||1|| Gantinalli huduvavana hora Hontu hogi beteyadvana Gante nadake naliyuvana bhuvai Kunthavidendu hastava torutihana ||2|| Bettadolage irutihana mana Mutti bhajiparige ishtava salisuvana Kotta varava tappadava…