Haridasa Sahitya — Vyasadasa

Danguruva sari hariya

ಡಂಗುರವ ಸಾರಿ ಹರಿಯ

Composer: Purandara Dasaru · Deity: Hari · Genre: Bhakti

Kannada lyrics

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ ಮಂಡಲಕ್ಕೆ ಪಾಂಡುರಂಗವಿಠಲನೆ ಪರದೈವವೆಂದು ।।ಪ।। ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡು ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ ।।೧।। ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ ।।೨।। ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು ಸಂತತ ಶ್ರೀ ಪುರಂದರವಿಠಲ ಪರದೈವವೆಂದು ।।೩।।

Transliteration

Dangurava sari hariya Dingarigarellaru Mandalakke panduranga vithala paradaivavemdu |pa| Hariyu mudida huvu harivanadolittukondu Harushadindadi padi kunidu cappalikkuta ||1|| Odala jagateya madi nudiva naligeya pididu Bidade dhanar- dhanar endu badidu cappalikkuta |2| Intu sakala lokake lakshmikantanilladillavendu Santatam Bajisuta meccida purandara vithalanendu |3|