Haridasa Sahitya — Vyasadasa

Chorage candrodaya sogasuvude

ಚೋರಗೆ ಚಂದ್ರೋದಯ ಸೊಗಸುವುದೇ

Composer: Purandara Dasaru · Deity: Hari · Genre: Ugabhoga

Kannada lyrics

ಚೋರಗೆ ಚಂದ್ರೋದಯ ಸೊಗಸುವುದೇ ಜಾರಗೆ ಸೂರ್ಯೋದಯ ಸೊಗಸುವುದೇ ಶ್ರೀ ರಮಣನ ಕಥೆಯು ಕಳ್ಳಗೆ ಮೆಚ್ಚುವುದೇ| ನಾರಿಗೆ ನಯವಿಲ್ಲದ ಚೆಲುವಿಕೆಯು ಹರಿಸ್ಮರಣವಿಲ್ಲದ ಹಾಡಿಕೆಯು ಅರಣ್ಯರೋದನ ಪುರಂದರ ವಿಠಲ|

Transliteration

Chorage candrodaya sogasuvude Jarage suryodaya sogasuvude Sri ramanana katheyu kallage meccuvude| Narige nayavillada celuvikeyu Harismaranavillada hadikeyu Aranyarodana purandara vithala|