Haridasa Sahitya — Vyasadasa
Chittajanayyana chintisu
ಚಿತ್ತಜನಯ್ಯನ ಚಿಂತಿಸು ಮನವೇ
Composer: Sripadarajaru · Deity: Vishnu · Genre: Advice
Kannada lyrics
ಚಿತ್ತಜನಯ್ಯನ ಚಿಂತಿಸು ಮನವೇ ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ|| ಕಾಲನ ದೂತರು ನೂಲು ಹಗ್ಗವ ತಂದು ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ ಕಾಲಪಾಶದೊಳಿಟ್ಟು ಶೂಲದಿಂದಿರುವಾಗ ಪಾಲಿಸುವರುಂಟೆ ಜಾಲವ ಮಾಡದೆ ||೧|| ದಂಡಧರನ ಭಟರು ಚಂಡಕೋಪದಿ ಬಂದು ಕೆಂಡದ ನದಿಯ ತಡೆಗೆ ಕೊಂಡೊಯ್ದು ಖಂಡಖಂಡವ ಕಿತ್ತು ಕೆಂಡದೊಳಿಡುವಾಗ ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨|| ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು ಕಂಗಳಿಗೆ ಸೀಸವ ಕಾಸಿ ಪೊಯ್ಯಲು ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩||
Transliteration
Chittajanayyana chintisu manave | hottu kaleyade purushottamana nenemanave || pa || Kaalanaa dootaru noolu haggava tandu | kaalu kaigala katti mele kutti || kaala paashadi sutti shooladindirivaaga | paalisuvaraaruntu jaalavanu maadadale || 1 || Dandadharana bhataru chandakopadi bandu | kendadaa nadi tadige kondoydu ninna || khanda khandava kitti kendadoliduvaaga | hendiru makkalu bandu bidisuvaren…