Haridasa Sahitya — Vyasadasa

Chiranjeevu yaagelo chinna neenu

ಚಿರಂಜೀವಿಯಾಗಿರೆಲೊ ಚಿಣ್ಣ ನೀನು

Composer: Vijaya Dasaru · Deity: Hari · Genre: Miscellaneous

Kannada lyrics

ಚಿರಂಜೀವಿಯಾಗಿರೆಲೊ ಚಿಣ್ಣ ನೀನು||pa|| ಪರಮ ಭಾಗವತರ ಪದಧೂಳಿ ಧರಿಸುತಲಿ||a.pa|| ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||1|| ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||2|| ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ ||3|| ಪಂಡಿತರು ಪಾಮರರು ಆರಿಗಾದರೂ ನಿನ್ನ ಕಂಡವರಿಗೆಲ್ಲ ಕೌತುಕ ತೋರಲಿ ಹೆಂಡಿರು ಮಕ್ಕಳು ಅಳಿಯ ಸ…

Transliteration

This song is composed by Vijaya dasaru to cure Mohana dasaru in his childhood from sore diesease Chiranjeevu yaagelo chinna neenu hari dasa dasara paada dhoolagi||pa|| jariya beda hariya mareya byadadendu thiriya byada kalara manage pogi oreya beda anyarige thathvagalannu bereya beda anya sathiya swapadhali||1|| saala madalu beda saaladhu enalu beda nalige hyangembo chintheyu beda koola janaradone…