Haridasa Sahitya — Vyasadasa
Chippagiri nilaya
ಚಿಪ್ಪಗಿರಿಯ ನಿಲಯ
Composer: Ramakaanta Vittala Dasaru · Deity: Vijaya Dasaru · Genre: Bhakti
Kannada lyrics
ಚಿಪ್ಪಗಿರಿಯ ನಿಲಯ ಸಲಹೊ ಅಪ್ಪ ವಿಜಯರಾಯ ||ಪ|| ಸರ್ಪಶಯನ ಕಂದರ್ಪ ಪಿತನ ದಯ ತಪ್ಪದೆ ಪೊಂದಿಹ ಅಪ್ರತಿಮಾರ್ಯರೆ ||ಅಪ|| ಹರಿ ಸೇವೆಯ ಬಯಸಿ ಜನಿಸಿದೆ ಪರಿ ಪರಿ ಅವತರಿಸಿ ಕರುಣದಿಂದ ಹರಿ ಶರಣರ ಪೊರೆಯಲು ಧರೆಯೊಳು ಚೀಕಲಪರಿವಿಲಿ ಉದಿಸಿದೆ ||೧|| ಭುಜಗ ಶಯನ ಹರಿಯ ನಿರುತ ಭಜಿಪ ಸುಜನ ಪ್ರೀಯ ಹೃಜಿಸುತ ತೈಜಸ ನಿಜಗುರು ತೋರಲು ವಿಜಯವಿಠ್ಠಲ ಹೃದಂಬುಜದಿ ನಿಮ್ಮೊಳು ನಿಂತ ||೨|| ವಿಜಯತೀರ್ಥ ಸ್ನಾನ ದರುಶನ ಋಜುಪಥ ಸೋಪಾನ ವ್ರಜತಮ ಕಳೆವುದು ಕುಜನಕೆ ದೊರಕದು ಸುಜನರೀ ಯಾತ್ರೆಯ ಯತಿಪರೋ ಸತತದಿ ||೩|| ಶ್ರೀಪತಿ ರಮಾಕಾಂತ ವಿಠ್ಠಲನ ಶ್ರೀಪದ ಹೃದಯವಂತ ರೂಪನೋಳ್ಪ ಮುನಿ ತಾಪವಳಿದು ಭವ ಕೂಪಕೆ ತಳ್ಳದಿರು ತಾಪಸರೊಡೆಯನೆ ||೪||
Transliteration
Chippagiri nilaya salaho appa vijayaraaya|| sarpasayana kandarpa pithana daya thappadhe pondhiha aprathimaaryane|| hari seveya bayasi janisidhe pari pari avatharisi karunadhindha hari charanara poreyali dareyolu chikalaparaviyalli udhisidhi||1|| bhujaka sayana hariya nirutha pujipa sujana priya srujisuka thaijasa nija guru thoralu vijayavittala hrudambujadhi nimmolu nindha||2|| vijaya theertha sna…