Haridasa Sahitya — Vyasadasa

Chintayenu madadiru

ಚಿಂತೆಯನು ಮಾಡದಿರು

Composer: Sripadarajaru · Deity: Vishnu · Genre: Advice

Kannada lyrics

ಚಿಂತೆಯನು ಮಾಡದಿರು ಚದುರೆ ನಿನಗೆ ನಾನು ಕಂತುಪಿತನನು ತೋರುವೆ ||ಪ|| ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ ||ಅ.ಪ|| ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದು ಮಂದಹಾಸದಲಿ ನಲಿದು ಒಂದೆ ಮನದಲಿ ದಿವ್ಯಗಂಧವನು ತಂದ್ಹಚ್ಚಿ ನಂದದಿಂದವನ ಮೆಚ್ಚಿ ಅಂದವಾದ ಕುಸುಮಹಾರವನು ಸುಖನಿಧಿಗೆ ಕಂಧರದಿ ನೀಡಿ ನೋಡಿ ಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿ ಎಂದೆಂದಿಗಗಲದಿರೆನ್ನೆ ರನ್ನೆ ||೧|| ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ- ಯೂಟಗಳನುಣ್ಣಿಸಿ ಲೇಸಾಗಿ ತಾಂಬೂಲ ತಬಕದಲಿ ತಂದಿಟ್ಟು ವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕು ಶ್ರೀಶನ್ನ ಮರೆಯ ಹೊಕ್ಕು ಆ ಸಮಯದಲಿ ನಿನಗೆ ದಾಸಿ ಎ…

Transliteration

Chinteyanu madadiru cadure ninage nanu Kamtupitananu toruve ||pa|| Samtoshadinda sarvabaranavittukondu Nimtu bagilolu node pade ||a.pa|| Ondu kshana padaravinda toledu kudidu Mandahasadali nalidu Onde manadali divyagandhavanu tand~hacci Nandadindavana mecci Andavada kusumaharavanu sukanidhige Kandharadi nidi nodi Sandeha bittu bigidappi manavondagi Endendigagaladirenna ranne ||1|| Asanava kottu ka…