Haridasa Sahitya — Vyasadasa

Charanava torai cheluvara

ಚರಣವ ತೋರೈ ಚೆಲುವರ

Composer: Vijaya Dasaru · Deity: Hari · Genre: Bhakti

Kannada lyrics

ಚರಣವ ತೋರೈ ಚೆಲುವರ ಅರಸನೆ ಚರಣವ ತೋರೈ ।।ಪ।। ಸ್ಮರಣೆ ಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ।।ಅ.ಪ।। ರಮ್ಮೆಯ ಮನಕೆ ಬೆಡಗು ತೋರಿದ ಚರಣವ ತೋರೈ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲುದೂರವ ಗೈದ ಚರಣವ ತೋರೈ ಘಮ್ಮನೆ ಮೊಸರ ಮೆದ್ದು ನಡೆದ ಚರಣವ ತೋರೈ ।।೧।। ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೈ ಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೈ ಬೇಕೆಂದು ಕುಬುಜೆಯ ಮನೆಗೆ ಪಾದ ಚರಣವ ತೋರೈ ನೂಕಿಭವಾಬ್ಧಿಯ ಬತ್ತಿಸಿಬಿಡುವ ಚರಣವ ತೋರೈ ।।೨।। ಬಿಡದಲೆ ಸರ್ವಜ್ಞತೀರ್ಥರಿಗೊಲಿದ ಚರಣವ ತೋರೈ ಬಡವರಾಧಾರ ದಿವ್ಯಭೂಷಣವಿಟ್ಟ ಚರಣವ ತೋರೈ ಕಡುಮುದ್ದು ಸಿರಿಕೃಷ್ಣ ವಿಜಯವಿಠಲ ನಿನ್ನ ಚರಣವ ತೋರೈ ಉಡುಪಿಯ ಸ್ಥಳದಲಿ…

Transliteration

Charanava torai cheluvara arasane Charanava torai ||pa|| Smarane matradali mukutiya koduva Charanava torai ||a.pa|| Rammeya manake bedagu torida charanava torai Bommadigala manake nilukada charanava torai Cimmi ravanana baludurava gaida charanava torai Gammane mosara meddu nadeda charanava torai ||1|| Gokulabumiya pavanamadida charanava torai Lokavanella adagisikonda charanava torai Bekemdu kubuje…