Haridasa Sahitya — Vyasadasa
Charana toledu
ಚರಣ ತೊಳೆದು ಜಲಪಾನ ಮಾಡುವೆನು
Composer: Vadirajaru · Deity: Vishnu · Genre: Bhakti
Kannada lyrics
ಚರಣ ತೊಳೆದು ಜಲಪಾನ ಮಾಡುವೆನು ॥ ಪ ॥ ನೀರೊಳಗೆ ನಿಂತುಕೊಂಬೆ | ಬೆನ್ನ ಭಾರ ಪೊತ್ತರೆ ನಗುವಳು ನಿನ್ನ ರಂಬೆ | ಮೋರೆ ತಗ್ಗಿಸಿರೆನೆಂಬೆ | ಜಗದಿ | ನರಸಿಂಹನಾಗಿ ಪೂಜೆಯ ಗೊಂಬೆ ॥ ೧ ॥ ಬಲಿಯ ದಾನವ ಬೇಡಿದ್ಯಲ್ಲೋ | ಕ್ಷತ್ರಕುಲ ಸವರಿ ಕೊಡಲಿಯ ಪಿಡಿದ್ಯಲ್ಲೋ | ಬಲವಂತ ನಿನಗೆದುರಿಲ್ಲೋ | ನಿನ್ನ | ರಾಜ್ಯವ ತಂದು ರಾಜ್ಯ ಪಾಲಿಸಿದ್ಯಲ್ಲೋ ॥ ೨ ॥ ಗೋಕುಲದೊಳು ಇದ್ದೆಯಲ್ಲೋ | ಲೋಕ | ಪಾಕು ಮಾಡಲು ಬುದ್ಧ ನಡ್ಯಲ್ಲೋ | ಏಕೆ ಹಯವನೇರಿದ್ಯಲ್ಲೋ | ನಮ್ಮ | ಸಾಕುವ ಹಯವದನ ನೀನೆ ಬಲ್ಲೆಲ್ಲೋ ॥ ೩ ॥
Transliteration
Charana toledu jalapana maduvenu || pa || Nirolage nintukonbe | Benna bara pottare naguvalu ninna ranbe | More taggisirenenbe | jagadi | Narasinhanagi pujeya gonbe || 1 || Baliya danava bedidyallo | Kshatra kula savari kodaliya pididyallo | Balavanta ninagedurillo | ninna | Rajyava tandu rajya palisidyallo| | 2 || Gokuladolu iddeyallo | loka | Paku madalu buddha nadyallo | Eke hayavaneridyallo | n…