Haridasa Sahitya — Vyasadasa

Chandrachuda sivashankara

ಚಂದ್ರಚೂಡ ಶಿವ

Composer: Purandara Dasaru · Deity: Shiva / Rudra Devaru · Genre: Bhakti

Kannada lyrics

ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ||ಪ|| ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ ||ಅ.ಪ|| ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ ||೧|| ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ ||೨|| ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನ…

Transliteration

Chandracuda sivasankara parvati ramanane ninage namo namo ||pa|| Sundara mrugadhara pinaaka dhanukara ganga Sira || Gajacharmambaradharaa nandivahananandadinda mujagadi merave nine Andu amruta ghatadindudisida visha tandu bhujisidava nine Kandarpana krodhadimda kanteredu konda ugranu nine Indiresa Sree ramana paadava chandadi pogaluva neene ||1|| Balamrukandajana kaalanu elevaaga paalisidava nine…