Haridasa Sahitya — Vyasadasa

Chandra guna Sandra

ಚ೦ದ್ರಾ ಗುಣಸಾ೦ದ್ರ –

Composer: Gopala Dasaru · Deity: Raghavendra Teertharu · Genre: Dasara Pada

Kannada lyrics

ಚ೦ದ್ರಾ ಗುಣಸಾ೦ದ್ರ – ರಾಘ ವೇ೦ದ್ರಗುರು ಸದ್ವೈಷ್ಣವ ಕುಮುದಕೆ || ಪ || ಶ್ರೀ ರಘುರಾಮ ಪದಾ೦ಬುಜ ಭೃ೦ಗ ಮಾರುತಮತ ಶುಭವಾರಿನಿಧಿಗೆ ಪೂರ್ಣ || ೧ || ಶ್ರೀಕರ ಹರಿಯ ನಿರಾಕರಿಸುವ ದುಷ್ಟ ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ || ೨ || ವರದ ಗೋಪಾಲವಿಠ್ಠಲನ ವಾರುತೆಗೆ ಹರುಷ ಬಡುವ ಹರಿಭಕುತ ಚಕೋರಕೆ || ೩ ||

Transliteration

Chandra gunasandra – raga Vendraguru sadvaishnava kumudake || pa || Sri ragurama padanbuja brunga Marutamata subavarinidhige purna || 1 || Srikara hariya nirakarisuva dushta Bikara maygala mukakamalake purna || 2 || Varada gopalaviththalana varutege Harusha baduva haribakuta cakorake || 3 ||