Haridasa Sahitya — Vyasadasa

Bhootapate Bhootapate

ಭೂತಪತೇ – ಭೂತಪತೇ

Composer: Haridasa · Deity: Bhootarajaru · Genre: Dasara Pada

Kannada lyrics

ಭೂತಪತೇ – ಭೂತಪತೇ ||ಪ|| ಭೂತಿ ಮಹತ್ ಶ್ರುತಿ | ಪಾದ್ಯವೆನಿಪ ಹರಿದೂತ ಬ್ರಾತ ಮಹ | ಭೂತ ಗಣಾಧಿಪ || ಅ.ಪ|| ಕರ್ಣ ವಿಕರ್ಣರು | ಘನ್ನ ಗುಣಸಂ-ಪನ್ನ ಮಹಿಮ ಮನ | ಬನ್ನವ ಕಳೆಯೋ || ಗುರುವಾಣತಿ ಧೃತ | ಶಿರದಿ ಬದರಿಯಿಂಹರಿ ಪ್ರತಿಮೆ ಸಹಿತ | ಶಿರನೀತ ವಿಮಾನ || ಬಂದುಕ ಕುಸುಮಗ | ಳಿಂದ ಅಲಂಕೃತಸುಂದರಾಂಗ ಮನ | ಬಂಧಿಸುಹರಿಯಲಿ || ಬಿಂಬನು ಗುರು ಗೋವಿಂದ ವಿಠಲ ಪದಡಿಂಬದಿ ಕಾಂಬುವ | ಹಂಬಲವೀಯೋ ||

Transliteration

Butapate – butapate || pa|| Buti mahat Sruti | padyavenipa hariduta brata maha | buta ganadhipa || a . Pa || Karna vikarnaru | Ganna gunasam – panna mahima mana | bannava kaleyo || Guruvanati dhruta | Siradi badariyimhari pratime sahita | siranita vimana || Banduka kusumaga | limda alankrutasundaranga mana | bandhisuhariyali || Bimbanu guru govinda vithala padadimbadi kambuva | hambalaviyo ||