Haridasa Sahitya — Vyasadasa

Buma idubare

ಭೂಮ ಇಡುಬಾರೆ

Composer: Harapanahalli Bheemavvanavaru · Deity: Hari · Genre: Bhakti

Kannada lyrics

ಭೂಮ ಇಡುಬಾರೆ ದ್ರುಪದರಾಯನರಸಿ ಭೀಮಧರ್ಮಾರ್ಜುನ ನಕುಲ ಸಾದೇವ ದ್ರೌಪದಿ ಕುಳಿತ ಎಲೆಗೆ ।।ಪ।। ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು ।।೧।। ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿ ಬಟ್ಟಲೋಳ್ ತುಂಬಿತ್ತು ಪರಡಿ ಪಾಯಸ ಘೃತ ಸಕ್ಕರೆಯು ।।೨।। ಕುಂದಣದ್ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದು ಬಂದು ಭೇಮೇಶಕೃಷ್ಣನ ಸಖರ‍್ಹೊಂದಿ ಕುಳಿತರು ಕೃಷ್ಣೆಸಹಿತ ।।೩।।

Transliteration

Buma idubare drupadarayanarasi Bimadharmarjuna nakula sadeva Draupadi kulita elege ||pa|| Mandige gullorigeyu bundya chakkuli karjikayi Cendada salyanna savige penigalu ennorigeyu ||1|| Happala sandigeyu savige battavimalatiyu gauli Battalol tumbittu paradi payasa gruta sakkareyu ||2|| Kundanad~harivana pididu kusumamallige mudidu nadedu Bandu bemesakrushnana sakar^hondi kulitaru krushnesahita ||3…