Haridasa Sahitya — Vyasadasa

Brundavanee devi

ವೃಂದಾವನೀ ದೇವಿ

Composer: Karpara Narahari Dasaru · Deity: Tulasi · Genre: Bhakti

Kannada lyrics

ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ ಮಂದಿರಳೆ ನಿನ್ನಪದಕೆ ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ || ಅಂದು ಧನ್ವಂತರಿಯು ತಂದಿರುವ ಪೀಯೂಷ ದಿಂದ ಪೂರಿತ ಕಲಶದಿ ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದಿ|| ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸುವಿ ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ ನಾ ಸ್ತುತಿಸಲೆಂತು ಜನನಿ || ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು ಸರ್ವ ವಿಬುಧರು ಮಧ್ಯದಿ ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ ಇರುತಿಹರು ಬಿಡದೆ ನಿರುತ || ತುಳಸಿ ನಿಮ್ಮಯ ಲಕ್ಷದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ…

Transliteration

Brundaavanee devi vandisuve shreetulasi mandirale ninna padake | Vandaaru janatatige mandaaralenisiruvi sandehavillavidake || 1 || Andu dhanvantariyu tandiruva peeyoosha dinda poorita kalashadi | Indiraapatiya aanandabhaashpodakada bindu beelalu janisidi || 2 || Shreetulasi ninnanu niketanadi poojipara paatakava pariharisuvi | Shreetarunipatige balu preeti vishayale ninna naa stutisalentu janani |…