Haridasa Sahitya — Vyasadasa
Boochi bandide
ಬೂಚಿ ಬಂದಿದೆ,
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ|| ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ|| ನಾಲ್ಕು ಮುಖದ ಬೂಚಿಯೊಂದು ಗೋಕುಲಕ್ಕೆ ಓಡಿ ಬಂದು ಲೋಕರನ್ನು ಎಳೆದುಕೊಂಡು ಕಾಕು ಮಾಡಿ ಒಯ್ಯುವುದಕೆ || ಮೂರು ಕಣ್ಣಿನ ಬೂಚಿಯೊಂದು ಊರೂರ ಸುತ್ತಿ ಬಂದು ದ್ವಾರದಲ್ಲಿ ನಿಂತಿದೆ ನೋಡೊ ಪೋರರನ್ನು ಒಯ್ಯುವುದಕೆ || ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ ಬಂಗಾರದಂಥ ಮಕ್ಕಳನೆಲ್ಲ ಕಂಗೆಡಿಸಿ ಒಯ್ಯುವುದಕೆ || ಆರು ಮುಖದ ಬೂಚಿಯೊಂದು ಈರಾರು ಕಂಗಳದಕೆ ವಾರು ವಾರು ಅಳುವ ಮಕ್ಕಳ ದೂರ ಸೆಳೆದು ಒಯ್ಯುವುದಕೆ || ಮರದ ಮೇಲೆ ಇರುವುದೊಂದು ಕರಾಳ ಮುಖದ ಬೂಚಿ ತರಳರನ್ನು ಎಳೆದುಕೊಂಡು ಪುರಂದರವಿಠಲಗೊಪ್ಪಿಸಲಿಕೆ ||
Transliteration
Buchi bandide, ranga buchi bandide ||pa|| Chaci kudidu summane ni pachikollo krushnayya ||a|| Nalku mukada buciyondu Gokulakke odi bandu Lokarannu eledukondu Kaku madi oyyuvudake ||1|| Muru kannina buciyondu Urura sutti bandu Dvaradalli nintide nodo Porarannu oyyuvudake ||2|| Angavella kangalulla Srungara mukada buci Bangaradantha makkalanella Kangedisi oyyuvudake ||3|| Aru mukada buchiyondu Iraru…