Haridasa Sahitya — Vyasadasa
Bo yati varadendra
ಭೋ ಯತಿ ವರದೇಂದ್ರ
Composer: Gokaavi Antadreesha Dasaru · Deity: Raghavendra Teertharu · Genre: Bhakti
Kannada lyrics
ಭೋ ಯತಿ ವರದೇಂದ್ರ – ಶ್ರೀಗುರುರಾಯ ರಾಘವೇಂದ್ರ || ಪ || ಕಾಯೋ ಎನ್ನ ಶುಭಕಾಯ ಭಜಿಸುವೆನು – ಕಾಯೋ ಮಾಯತಮಕೆ ಚಂದ್ರಾ || ಅ || ಕಂಡ ಕಂಡ ಕಡೆಗೆ ತಿರುಗಿ – ಬೆಂಡಾದೆನೋ ಕೊನೆಗೆ ಕಂಡ ಕಂಡವರ ಕೊಂಡಾಡುತ ನಿಮ್ಮ – ಕಂಡೆ ಕಟ್ಟ ಕಡೆಗೆ || ೧ || ನೇಮವು ಎನಗೆಲ್ಲೀ ಇರುವುದು – ಕಾಮಾಧಮನಲ್ಲಿ ಭೋ ಮಹಾಮಹಿಮನೆ ಪಾಮರ ನಾ – ನಿಮ್ಮ ನಾಮವೊಂದೆ ಬಲ್ಲೆ || ೨ || ಮಂತ್ರವ ನಾನರಿಯೇ – ಶ್ರೀಮನ್ಮಂತ್ರಾಲಯ ಧೊರೆಯೆ ಅಂತರಂಗದೊಳು ನಿಂತು ಪ್ರೇರಿಸುವ – ಅನಂತಾದ್ರೀಶ ನಾನರಿಯೆ || ೩ ||
Transliteration
BO yati varadendra – srigururaya ragavendra || pa || Kayo enna subakaya Bajisuvenu – kayo mayatamake chandra || a || Kanda kanda kadege tirugi – bendadeno konege Kanda kandavara kondaduta nimma – kande katta kadege || 1 || Nemavu enagelli iruvudu – kamadhamanalli BO mahamahimane pamara na – nimma namavonde balle || 2 || Mantrava nanariye – srimanmantralaya dhoreye Antarangadolu nintu prerisuva – a…