Haridasa Sahitya — Vyasadasa
Binyaipe ninaganu bimasena |
ಬಿನ್ಯೈಪೆ ನಿನಗಾನು ಭೀಮಸೇನ
Composer: Jagannatha Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ಬಿನ್ಯೈಪೆ ನಿನಗಾನು ಭೀಮಸೇನ ||pa|| ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||a.pa|| ನೀಚರಿಂದಲಿ ಬಂದ ಭಯಗಳಿಂದಲಿ ಜನರು ಯೋಚಿಸುವರೆಮಗಾರು ಗತಿಯೆನುತಲಿ ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||1|| ಭವ ವಿಮೋಚಕನು ನೀನೆ ಸಚ ರಾಚರಕೆ ಸಂತತ ಪುರೋಚನಾರಿ ಪ್ರಾಚೀನ ಕರ್ಮಾಬ್ಧಿ ವೀಚಿಯೊಳು ಮುಳುಗಿಹ ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆ ||2|| ಖಚರೋತ್ತಮನೆ ನಿನ್ನ ಸುಚರಿತೆಗಳನು ಕೇಳಿ ರಚನೆಗೈಯ ಬಲ್ಲೆನೆ ಅಚಲ ಸತ್ವ ಪ್ರಚಲಿಸುತಿಹ ಮನೋವಚನ ಕಾಯುವ ಘಟೋ ಪ್ರಚಯ ಮಾಡುವುದೆಂದು ||3|| ಈ ಚತುರ್ದಶ ಭುವನದಾಚಾರ್ಯ ದೇಶ ಕಾ ಲೋಚಿತದ ಧರ್ಮಗಳ ಸೂಚಿಸೆಮಗೆ ಪಾಚಕನೆ ನಿನ್ನಡಿಗೆ ಚಾಚುವ…
Transliteration
Binyaipe ninaganu bimasena ||pa|| Bannabadutiha janara Bayava pariharisendu ||a.pa|| Nicarimdali banda bayagalindali janaru Yocisuvaremagaru gatiyenutali Kicakamtaka ninna kirti bahuvidha keli Yacisuve ninaganu ellaranu salahendu ||1|| Bava vimocakanu nine saca Racarake santata purocanari Pracina karmabdhi viciyolu mulugiha Kecarendrahipa trilocanara guruve ||2|| Kacarottamane ninna sucaritegalanu…