Haridasa Sahitya — Vyasadasa

Binnahake bayillavayya

ಬಿನ್ನಹಕೆ ಬಾಯಿಲ್ಲವಯ್ಯಾ

Composer: Purandara Dasaru · Deity: Hari · Genre: Philosophy

Kannada lyrics

ಬಿನ್ನಹಕೆ ಬಾಯಿಲ್ಲವಯ್ಯಾ ಅನಂತ ಅಪರಾಧ ಎನ್ನಲ್ಲಿ ಇರಲಾಗಿ ।।ಪ।। ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೇ ।।ಅ.ಪ।। ಶಿಶುಮೋಹ ಸತಿಮೋಹ ಜನನಿಜನಕರ ಮೋಹ ರಸಿಕ ಭ್ರಾಂತಿಯ ಮೋಹ ರಜಮನ್ನಣೆ ಮೋಹ ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಹಸುನುಳ್ಳ ಆಭರಣಗಳ ಮೋಹದಿಂದ ।।೧।। ಅನ್ನಮದ ಅರ್ಥಮದ ಅಖಿಳ ವೈಭವದ ಮದ ಮುನ್ನ ಪ್ರಾಯದ ಮದವು ರೂಪಮದವು ತನ್ನ ಸತ್ವದ ಮದ ಧಾತ್ರಿ ವಶವಾದ ಮದ ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ ।।೨।। ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟ ಜೀವನದಾಸೆ ಪುರಂದರವಿಠಲ ।।೩।।

Transliteration

Binnahake bayillavayya Ananta aparadha ennalli iralagi ||pa|| Asurari ninna mareteno kayo hariye ||a.pa|| Sisumoha satimoha jananijanakara moha Rasika brantiya moha rajamannane moha Pasumoha bumoha bandhuvargada moha Hasunulla abaranagala mohadimda ||1|| Annamada arthamada akila vaibavada mada Munna prayada madavu rupamadavu Tanna satvada mada dhatri vasavada mada Innu tanagedurillaventemba madadi…