Haridasa Sahitya — Vyasadasa
Bimba poleyutire dinda dandaneyake
ಬಿಂಬ ಪೊಳೆಯುತಿರೆ ದಿಂಬ ದಂಡನೆ ಯಾಕೆ
Composer: Vijaya Dasaru · Deity: Hari · Genre: Ugabhoga
Kannada lyrics
ಬಿಂಬ ಪೊಳೆಯುತಿರೆ ದಿಂಬ ದಂಡನೆ ಯಾಕೆ ತುಂಬಿದೂಟವಿರೆ ತಿರುಪೆ ಯಾಕೆ ಕೊಂಬೆಯಲಿಪ್ಪ ಹಣ್ಣು ತಾನೇ ಬೀಳುತ್ತಿರಲು ಕುಂಭಿಣಿಯಲಿ ಕೆಡಹಿ ಫಲ ಮೆಲುವರೆ ಹಂಬಲಗೊಳಿಸಲ್ಲ ಕರ್ಮವೆಂಬುದು ತೊರದು e್ಞÁ ನಾಂಬುಧಿಯೊಳಗಿರು ನಂಬಿ ಹರಿಯ ಸಾರು ಗಂಭೀರ ಪುರುಷ ಶ್ರೀ ಹರಿ ವಿಜಯವಿಠಲರೇಯನ ಬಿಂಬ ನೋಡಿದವರಿಗೆ ಇಂಬುಂಟು ವೈಕುಂಠದಲ್ಲಿ||
Transliteration
bimba poleyutire dimba dandane yaake tumbidootavire tirupe yaake kombeyalippa hannu taane biiluttiralu kumbhiniyali kedahi phala meluvare hambalagolisalla karmavembudu toradu enaa naambudhiyolagiru nambi hariya saaru gambhiira purusha shrii hari vijayavithalareyana bimba nodidavarige imbuntu vaikunthadalli||