Haridasa Sahitya — Vyasadasa
Bideno ninna charana
ಬಿಡೆನೊ ನಿನ್ನ ಚರಣಕಮಲವ
Composer: Vadirajaru · Deity: Vishnu · Genre: Dasara Pada
Kannada lyrics
ಬಿಡೆನೊ ನಿನ್ನ ಚರಣಕಮಲವ ಎನ್ನ ।।ಪ॥ ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ ।।ಅ.ಪ॥ ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೆ ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ ಹರಿಪಾದ ತೀರ್ಥವೆಂದು ಹರ ಧರಿಸಿದನಾಗ ।।೧।। ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗ ಪಾಷಾಣವಾಗುತ್ತ ಪಥದೊಳಗಿರಲು ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು ಪಾಪರಹಿತಳಾಗಿ ಪದವಿ ಕಂಡಳಾಗ ।।೨।। ವಜ್ರಾಂಕುಶಧ್ವಜ ಪದುಮ ರೇಖೆಗಳಿಂದ ಪ್ರಜ್ವಲಿಸುವ ನಿನ್ನ ಪಾದಪದ್ಮವನು ಗರ್ಜಿಸಿ ಭಜಿಸುವೆ ಹಯವದನನೆ ಭವ- ಜರಜರ ಬಿಡಿಸುವನೆಂದು ನಂಬಿಹೆನಾಗಿ ।।೩।।
Transliteration
Bideno ninna charanakamalava enna ||pa|| Hrudayamadhyadolittu Bajisuve anudina ||a.pa|| Baliya danava bedi aleye brahmandava Nalinodbava bandu padava toleye Ugurina koneyinda udisidala gange Haripada tirthavendu hara dharisidanaga ||1|| A patisapadi ahalye sasira yuga Pashanavagutta pathadolagiralu Sripati ninnaya sripada sokalu Paparahitalagi padavi kandalaga ||2|| Vajrankusadhvaja paduma rekegal…