Haridasa Sahitya — Vyasadasa

Bharati janani palisu nitya marutana

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ

Composer: Vijaya Dasaru · Deity: Bharati Devi · Genre: Bhakti

Kannada lyrics

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ | ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ||pa|| ಭಕುತಿ ಇಲ್ಲದೇ ಅನುದಿನ | ಅಕಟನಿಲ್ಲದೆ | ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ | ಪಕೆ ಎರಗಿದೆ ಯಾತಕೆ ಬಾರದವನಾದೆ ||1|| ಆರನ್ನ ಕಾಣದೆ ನಿನ್ನನು ನಾ | ಸಾರಿದೆ ಮಾಣದೆ | ವಾರ ವಾರಕೆನ್ನ ಉದ್ಧಾರವ ಮಾಳ್ಪುದು | ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ ||2|| ನುತಿಸಿ ವಂದನೆ ಮಾಡುವೆ ನಿತ್ಯ | ಕೃತಿಯನಂದನೆ | ಸತತ ವಿಜಯವಿಠ್ಠಲನ ಪದಾಬ್ಜದಿ | ರತಿ ಆಗುವಂತೆ ಸುಮತಿಯನು ಕರುಣಿಸೇ ||3||

Transliteration

Bharati janani palisu nitya marutana rani | Bari barige enna bara ninnade vani ||pa|| Bakuti illade anudina | Akatanillade | Sakala thavinalli arbakanagi tirugi pa | Pake eragide yatake baradavanade ||1|| Aranna kanade ninnanu na | Saride manade | Vara varakenna uddharava malpudu | Karunyadindali srungaravaridhi vega ||2|| Nutisi vandane maduve nitya | Krutiyanandane | Satata vijayaviththalana pad…