Haridasa Sahitya — Vyasadasa

Bharathi bakutiyanu koduvadu

ಭಾರತಿಭಕುತಿಯನು ಕೊಡೆನಗೆಮಾರುತಿಸತಿನೀನು

Composer: Gopala Dasaru · Deity: Bharati Devi · Genre: Bhakti

Kannada lyrics

ಭಾರತಿಭಕುತಿಯನು ಕೊಡೆನಗೆಮಾರುತಿಸತಿನೀನು|| ಪ|| ಮೂರು ಲೋಕದೊಳು ಯಾರು ನಿನಗೆಸರಿ ಮಾರಾರಿಗಳಿಂದಾರಾಧಿತಳೆ ||ಅ.ಪ|| ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿ ಮಂದಹಾಸ ಮುಖದಿಂದಲಿ ನೋಡಿ ನಿನ್ನ ಕಂದನೆಂದು ಎನ್ನ ಮುಂದಕೆ ಕರೆಯೆ|| ವಾಣಿ ಎನ್ನ ವದನದಲ್ಲಿಡುಮಾಣದೆಹರಿಸ್ತವನ ವೀಣಾಧೃತ ಸುಜ್ಞಾನಿಯೆ ಪಂಕಜ- ಪಾಣಿಯೆ ಕೋಕಿಲವಾಣಿಯೆ ಎನ್ನಯ || ಮಂಗಳಾಂಗಿಯೆ ಎನ್ನಅಂತರಂಗದಲ್ಲಿ ಮುನ್ನ ತುಂಗವಿಕ್ರಮ ಗೋಪಾಲವಿಠಲನ್ನ ಹಿಂಗದೆ ನೆನೆವ ಸುಖಂಗಳನು ಕೊಡೆ ||

Transliteration

bharathi bakutiyanu koduvadu maruta sati ninu | pa | murulokadolagaru ninage sari | mararigalindaradhitale | a.pa. | vani enna vadanadallidu manade hari stavana | vinadhruta sujnaniye pankaja paniye kokila vaniye enage | 1 | sundari subakari sumanasa vrunda sobita kabari | mandahasa mukadinda nodi ninna kandanendu enna mundakke kareye | 2 | mangalangiye enna antarangadallidu munna | tunga vikrama…