Haridasa Sahitya — Vyasadasa
Bhagirathi devi bayanivarane gange
ಭಾಗೀರಥೀದೇವಿ ಭಯನಿವಾರಣೆ ಗಂಗೆ |
Composer: Purandara Dasaru · Deity: Ganga · Genre: Bhakti
Kannada lyrics
ಭಾಗೀರಥೀದೇವಿ ಭಯನಿವಾರಣೆ ಗಂಗೆ | ಸಾಗರನ ನಿಜರಾಣಿ ಸಕಲಕಲ್ಯಾಣಿ ||pa|| ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ | ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ || ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ | ಬೊಮ್ಮಾಂಡವನು ಪಾವನಮಾಡ ಬಂದೆ ||1|| ದೇವಿ ನೀ ವಿಷ್ಣುಪಾದೋದಕವೆಂದೆನಿಸಿ | ದೇವತೆಗಳಿಗೆಲ್ಲ ಅಧಿಕವಾದೆ || ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-| ದೇವನ ಶಿರದಿಂದ ಧರೆಗಿಳಿದು ಬಂದೆ ||2|| ಜಹ್ನವಿನುದರದಿ ಪೂಕ್ಕ ಕಾರಣದಿಂದ | ಜಾಹ್ನವಿಯೆಂದು ನೀನೆನಿನೆಕೊಂಡೆ || ಮುನ್ನ ನರಕಕ್ಕಿಳಿದ ಸಗರರಾಯನ ವಂಶ- | ವನ್ನು ಪಾವನಮಾಡಿ ಪೊರೆಯಲು ಬಂದೆ ||3|| ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ | ದಿಟ್ಟಿಸಲು ಮೂರುಜನ್ಮದಿ ಮು…
Transliteration
BAgIrathIdEvi BayanivAraNe gange | sAgarana nijarANi sakalakalyANi ||pa|| omme SrIhari pAdakamaladinduduBavisi | brahmakara pAtreyali nindu bande || SrI mannArAyaNana pAdatIrthavAgi | bommAnDavanu pAvanamADa bande ||1|| dEvi nI viShNupAdOdakavendenisi | dEvategaLigella adhikavAde || dEvarellaru neredu talebAgidaru mahA-| dEvana Siradinda dharegiLidu bande ||2|| jahnavinudaradi pUkka kAraNadinda |…