Haridasa Sahitya — Vyasadasa
Bhagavad gita sara
ಕೇಳಯ್ಯ ಎನ್ನ ಮಾತು
Composer: Vyasarajaru · Deity: Krishna / Govinda / Mukunda · Genre: Philosophy
Kannada lyrics
ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ ||ಪ|| ಶ್ಲೋಕ | ಕುರುಕ್ಷೇತ್ರದಿ ಎನ್ನವರು ಪಾಂಡವರು ಪೇಳೋ ಸಂಜಯಾ ಏನು ಮಾಡುವರು ಕೂಡಿ | ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾ| ಮಾತನಾಡಿದ ನಿನ್ನ ಸುತ ದ್ರೋಣಗಿಂತು || ಪಲ್ಲವಿ| ಕೇಳಿ ತಾ ಪಾರ್ಥನು ಕುರು ದಂಡ ರಣದಲಿ ಚಂಡ | ಗಾಂಡೀವ ಕರದಂಡ ಅಚ್ಯುತ ಪಿಡಿರಥ ನಡೆ ಮುಂದ ಬಹು ತ್ವರದಿಂದ | ನೋಡುವೆ ನೇತ್ರದಿಂದ || ಗುರುಹಿರಿಯರ ಕೂಡ ಯಾಕೆಂದ ಯುದ್ಧ ಸಾಕೆಂದ | ಭಿಕ್ಷವೆ ಸುಖವೆಂದ|| ಕುಂತಿಸುತ ಈ ಮಾತು ಉಚಿತಲ್ಲ ನಿನಗಿದು ಸಲ್ಲ | ಪಿಡಿ ಗಾಂಡೀವ ಬಿಲ್ಲ ||೧|| ಶ್ಲೋಕ| ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ ಇಂಥ ದೇಹಕೆ ಮೋಹ ಮತ್ತ್ಯಾಕಿಲ್ಲಿ| ಕಾಯ್ದು ಕೊಲ್ಲುವ ನಾನು ಇರುತಿರಲ…
Transliteration
Kelayya enna matu parthane gitadarthane ||pa|| Sloka | Kurukshetradi ennavaru pandavaru Pelo sanjaya Enu maduvaru kudi | Kelayya arasane nodi pandavara sena| Matanadida ninna suta dronagintu || Pallavi| Keli ta parthanu kuru danda Ranadali chanda | gandiva karadanda Achyuta pidiratha nade munda Bahu tvaradinda | noduve netradinda || Guruhiriyara kuda yakenda Yuddha sakenda | bikshave sukavenda|| K…