Haridasa Sahitya — Vyasadasa
Bettadantha duritavu suttamuttalottare
ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟರೆ
Composer: Purandara Dasaru · Deity: Hari · Genre: Ugabhoga
Kannada lyrics
ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟರೆ ಕೃಷ್ಣನಾಮದ ಕಿಡಿ ಬಿದ್ದು ಬೆಂದುಹೋದದ್ದು ಕಂಡೆ ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು ನಿನ್ನ ಕಂಡರೆ ಶಿಕ್ಷಿಸದೆ ಬಿಡ ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು ಪುಂಡರೀಕಾಕ್ಷ ನಮ್ಮ ಪುರಂದರವಿಠಲ ||
Transliteration
Bettadantha duritavu suttamuttalottare Krushnanamada kidi biddu benduhodaddu kande Ele ele duritave tirugi nodade hogu Ele ele duritave marali nodade hogu Ninna kandare sikshisade bida Innomme kandare Sirava cendaduvanu Pundarikaksha namma purandara vittala||