Haridasa Sahitya — Vyasadasa
Besarade Bhajisiro Purandara dasaraayara
ಬೇಸರದೆ ಭಜಿಸಿರೋ ಪುರಂದರ ದಾಸರಾಯರ
Composer: Vijaya Dasaru · Deity: Purandara Dasaru · Genre: Bhakti
Kannada lyrics
ಬೇಸರದೆ ಭಜಿಸಿರೋ ಪುರಂದರ ದಾಸರಾಯರ ಶ್ರೀಶ ನಿಮ್ಮನು ಉದಾಶೀನ ಮಾಡದೆ ಪೋಷಿಸುವ ಸಂತೋಷದಿಂದಲಿ ||pa|| ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಕರುಣದಲಿ ಅವರುದ್ಧ್ದರಿಸಲೋಸುಗ ಮನೆಗೆ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ ||1|| ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ||2|| ಹಿತ್…
Transliteration
Besarade bajisiro purandara dasarayara Srisa nimmanu udasina madade Poshisuva samtoshadindali ||pa|| Purandaragadada olage hiriya savukaranenasi Paripariya saukyagala surisutta Irutiralu narahari tvaritadim brahmananagutta Karunadali avaruddhdarisalosuga manege Pogutta yajamana kandu Jaridu brahmananhorage hakalu Marudivasa mat~hogi nimta ||1|| Baribarige savukarana Moreg~hotti mereyillade Aru tim…