Haridasa Sahitya — Vyasadasa

Belagire aruthiya sri tulasige

ಬೆಳಗಿರೆ ಆರುತಿಯ ಶ್ರೀ ತುಳಸಿಗೆ

Composer: Karpara Narahari Dasaru · Deity: Tulasi · Genre: Aarathi

Kannada lyrics

ಬೆಳಗಿರೆ ಆರುತಿಯ ಶ್ರೀ ತುಳಸಿಗೆ ||pa|| ಬೆಳಗಿರೆ ಆರುತಿ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳವೆಂದು ಪಾಡುತ ||a.pa|| ಸುಧೆಯ ಕಲಶದೊಳು ಮಧುವೈರಿನಯನದ ಮುದ ಜಲಬೀಳಲು ಉದುಭವಿಸಿದಳೆಂದು ||1|| ದರುಶನ ಮಾತ್ರದಿ ದುರಿತಗಳೋಡಿಸಿ ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು ||2|| ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ||3||

Transliteration

beLagire Arutiya SrI tuLasige ||pa|| beLagire Aruti tuLasidEvige nitya lalaneyarella maMgaLavendu pADuta ||a.pa|| sudheya kalaSadoLu madhuvairinayanada muda jalabILalu uduBavisidaLendu ||1|| daruSana mAtradi duritagaLODisi sthiravAda sauBAgya karuNisuvaLendu ||2|| iLeyoLu kArpara nilaya SrInarahari olumeya paDeda SrI tuLasidEvige bEga||3||