Haridasa Sahitya — Vyasadasa
Belagina javadi baro hariye
ಬೆಳಗಿನ ಝಾವದಿ ಬಾರೊ ಹರಿಯೆ,
Composer: Vijaya Dasaru · Deity: Hari · Genre: Bhakti
Kannada lyrics
ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ||pa|| ಚರಣ ತೊಳೆದು ಜಲಪಾನ ಮಾಡುವೆನೊ||a.pa|| ನೀರೊಳು ನಿನ್ನನು ಕಾಂಬೆ ಗಿರಿ ಭಾರಪೊತ್ತರೆ ನಗುವಳೊ ನಿನ್ನ ರಂಭೆ ಮೋರೆ ತಗ್ಗಿಸಿದರೇನೆಂಬೆ ಅಲ್ಲಿ ನಾರಸಿಂಹನಾಗಿ ಪೂಜೆಯ ಗೊಂಬೆ ||1|| ಬಲಿಯದಾನವ ಬೇಡಿದ್ದೆಲ್ಲ ನೀ ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ ಛಲವಂತ ನಿನಗೆದುರಿಲ್ಲ ನೀ ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ ||2|| ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ ಬ್ರಹ್ಮಾದಿಗಳು ಸಮರಲ್ಲ ಬಲು ಹಮ್ಮಿಲಿ ಹಯವೇರಿ ವಿಜಯವಿಠ್ಠಲ ||3|| Belagina javadi baro hariye, ninna ||pa||
Transliteration
Carana toledu jalapana maduveno||a.pa|| Nirolu ninnanu kambe giri Barapottare naguvalo ninna rambe More taggisidarenembe alli Narasimhanagi pujeya gombe ||1|| Baliyadanava bediddella ni Caladi kshatriyara samhara madedyalla Calavanta ninagedurilla ni Nolid~hanumanige ajapadavanityella ||2|| Rukminisage samarilla krushna Bimmane tripura satiyarappidyella Brahmadigalu samaralla balu Hammili hayaveri…