Haridasa Sahitya — Vyasadasa

Bega sagi barayya

ಬೇಗ ಸಾಗಿ ಬಾರಯ್ಯ

Composer: Abhinava Janardanavitthala Dasaru · Deity: Raghavendra Teertharu · Genre: Bhakti

Kannada lyrics

ಬೇಗ ಸಾಗಿ ಬಾರಯ್ಯ – ರಾಘವೇಂದ್ರ ಗುರುವೆ ಬಾಗಿ ಭಕುತಿಲಿ ಚೆನ್ನಾಗಿ ತುತಿಪೆ ನಿನ್ನ || ಪ || ಭಾಗವತಾಗ್ರಣಿ ಭಾಗವತರ ಪ್ರೀಯ ಯೋಗಿ ಕುಲವರ್ಯ ಯೋಗೇಂದ್ರ ವಿನುತ || ಅ || ಗಿರಿಯ ವೆಂಕಟ ನರಹರಿ ರಾಮಕೃಷ್ಣ ವ್ಯಾಸ ಸಿರಿ ನಾರಾಯಣ ತನ್ನ ವರಮೂರ್ತಿಗಳಿಂದ ಸರಸೀಜಭವ ವಾಯು ಸರಸ್ವತಿ ಭಾರತಿ ತ್ರಿ ಪುರಹರ ಶೇಷ ವಿಪ ಸುರಪಾದ್ಯರ ಕೈಯಿಂದ ಥರಥರದಲಿ ಪರಿಪರಿ ಸೇವೆಯ ವಿ ಸ್ತಾರವಾಗಿ ಕೊಳ್ಳುತ ಮೆರಗುತ ನಿಲಿಸಿಹ ಸ್ಥಿರವಾಗಿ ನಿಂದು ಆಶ್ಚರ್ಯವ ಧರೆಗೆ ತೋರ್ಪುದಕೆ ಮೆರೆವುತಲಿಹ || ೧ || ರಥಾರೂಢನಾಗಿ ಬರುತಲಿರೆ ನಿನ್ನ ಕ್ಷಿತಿಸುರರೆಲ್ಲ ಭಾಗ ವತ ಪಂಚಮವೇದ ಭಾರತ ಮತ್ತೆ ಶ್ರುತಿಗಳಿ೦ದ ಬಲು ತುತಿಸುತಲಿನ್ನು ಅತಿ ಹರುಷದಿ ಬಾರೆ ಯತಿಗ…

Transliteration

Bega sagi barayya – raghavendra guruve Bagi Bakutili cennagi tutipe ninna || pa || Bagavatagrani bagavatara priya Yogi kulavarya yogendra vinuta || a || Giriya venkata narahari ramakrushna vyasa Siri narayana tanna varamurtigalinda Sarasijabava vayu sarasvati barati tri Purahara sesha vipa surapadyara kaiyinda Tharatharadali paripari seveya vi Staravagi kolluta meraguta nilisiha Sthiravagi nindu a…