Haridasa Sahitya — Vyasadasa

Beda beda elele

ಬೇಡ ಬೇಡ ಎಲೆಲೆ

Composer: Kanakadasaru · Deity: Hari · Genre: Philosophy

Kannada lyrics

ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮಬಾಡದಾಧಿಪನ ಕಿಂಕರನ ಕೂಡ ತೊಡರು ||pa|| ವಾರಿಕಲ್ಲಾನೆ ವಜ್ರದ ಮೃಗೇಂದ್ರನ ಕೂಡೆಹೋರಿ ಹೊದುಕುಳಿಗೊಂಡು ಗೆಲಬಲ್ಲುದೆ ?| ಭೂರಿ ಭೂತಗಳೆ ಭೂಸತಿಯ ಕಾಂತನ ನಾಮಧಾರಿಗಳ ತೊಡರು ನಿಮಗಳವಡದು ನಾನರಿವೆ ||1|| ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡಪ್ರಾಣದಿಂ ಕಾದಿ ಜಯಿಸುವುದೆ ಹೇಳಾ| ಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳುದಾನವಾರಿಯ ದಾಸಗಳವಡವು ನಾನರಿವೆ ||2|| ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳುನಲಿದು ಉಯ್ಯಾಲೆಯನಾಡುವವೆ ಹೇಳಾ| ಕಲಿ ಬಾಡದಾದಿಕೇಶವರಾಯ ಚಕ್ರದಲಿತಲೆಗಳನು ಚೆಂಡಾಡಿಸುವ ಕಾಣೊ ಬೇಡ ||3||

Transliteration

Beda beda elele durithagalira namma Badadadipana kinkarana kuda thodadu||p|| Vari kallane vajrada mrugendrana koode Hori hodukuligondu gellaballude Buri buthagale busathiya kanthana naama Darigala thodaraya Nimagalavadadu Naanarive||1|| Menadahikoti dalluriya garudana kuda Thranadim kaadi jayisuvude hela Kshoniyolu ksheeenadaiva bramhanda kotigalu Daanavariya Dasagalavadavu Naanariye||2|| Huliya m…