Haridasa Sahitya — Vyasadasa
Bayi narida mele ekantave
ಬಾಯಿ ನಾರಿದ ಮೇಲೆ ಏಕಾಂತವೆ
Composer: Kanakadasaru · Deity: Hari · Genre: Advice
Kannada lyrics
ಬಾಯಿ ನಾರಿದ ಮೇಲೆ ಏಕಾಂತವೆ ತಾಯಿ ತೀರಿದ ಮೇಲೆ ತವರಾಸೆಯೆ ।।ಪ॥ ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ ಬಣ್ಣಗುಂದಿದ ಮೇಲೆ ಬಹುಮಾನವೆ ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ।।೧।। ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣ ಬಹುದೆ ಚಳಿಯುರಿಗೆ ಚಂದನದ ಲೇಪ ಹಿತವೆ ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ ಬೆಲೆಬಿದ್ದ ಸರಕಿನೊಳು ಲಾಭವುಂಟೆ ।।೨।। ಪಥ್ಯ ಸೇರದ ಮೇಲೆ ನಿತ್ಯಸುಖವೆನಬಹುದೆ ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೆ? ।।೩।।
Transliteration
Bayi narida mele ekantave Tayi tirida mele tavaraseye ||pa|| Kannu ketta mele kadurupa celvikeye Bannagundida mele bahumanave Punyatirida mele paraloka sadhanave Sunnavillada vilyavadu svadumayave ||1|| Kilubina battalolu huli kalasi una bahude Caliyurige chandanada lepa hitave Molebidda henninolu mohakke sogasahude Belebidda sarakinolu labavunte ||2|| Pathya serada mele nityasukavenabahude Sattva…