Haridasa Sahitya — Vyasadasa

Bavvu bandhithalla

ಬವ್ವು ಬಂದಿತಲ್ಲ,

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಬವ್ವು ಬಂದಿತಲ್ಲ, ರಂಗಯ್ಯ, ಬವ್ವು ಬಂದಿತಲ್ಲ ||ಪ|| ಬವ್ವು ನಿನ್ನ ಕಾಲು ಕಚ್ಚಿತೋ ಕೃಷ್ಣ ||ಅ|| ಸೆರಗು ಪಿಡಿದು ನೀ ಹೇಳದೆ ಮಲಗೊ ತಿರುಗಿದರೆ ನೋಡು ಮತ್ತಿಲ್ಲೆ ಬೂದಿಯ ಹಚ್ಚಿದೆ ಕೂದಲು ಬಿಚ್ಚಿದೆ ಸ್ವಾದವ ಕಂಡು ಬಂದಿತಿಲ್ಲಿ || ಹಿಡಿದ ತ್ರಿಶೂಲ ಪಿಡಿದ ಕಪಾಲ ಮುಕ್ಕಣ್ಣಲಿ ಕಿಡಿಯುದುರಿಸುತ ಹಾವು ಕೊರಳಲಿಟ್ಟು ಹುಲಿಯ ಚರ್ಮವ ಹೊದ್ದು ಸುತ್ತಲಿ ಬರುತಿದೆ ಬವ್ವುತನ ದಂಡು || ಕಪ್ಪುಗೊರಳ ಬವ್ವು ಒಪ್ಪುವ ಎತ್ತನೇರಿ ತಪ್ಪದೆ ಬಂದೀತು ಬಿಡು ಮುನ್ನೆ ಅಪ್ಪ ಕೃಷ್ಣರಾಯ ಪುರಂದರವಿಠಲನೆ ಒಪ್ಪಿಸಿ ಕೊಡುವೆನು ಈಗಲೆ ನಿನ್ನ ||

Transliteration

bavvu banditalla, rangayya, bavvu banditalla ||pa|| Bavvu ninna kalu kaccito krushna ||a|| Seragu pididu ni helade malago Tirugidare nodu mattille Budiya haccide kudalu biccide Svadava kandu banditilli ||1|| Hidida trisula pidida kapala Mukkannali kidiyudurisuta Havu koralalittu huliya carmava hoddu Suttali barutide bavvutana dandu ||2|| Kappugorala bavvu oppuva ettaneri Tappade banditu bidu munne…