Haridasa Sahitya — Vyasadasa

Bavisamira guru sri vadiraja

ಭಾವಿಸಮೀರ ಗುರು ಶ್ರೀ ವಾದಿರಾಜ

Composer: Haridasa · Deity: Vadirajaru · Genre: Bhakti

Kannada lyrics

ಭಾವಿಸಮೀರ ಗುರು ಶ್ರೀ ವಾದಿರಾಜ ನಿಮ್ಮ ಸೇವಿಪ ಜನರಿಗಭೀಷ್ಟವನೀವ ||pa|| ಹನುಮ ಭೀಮ ಮಧ್ವರೊಡಗೂಡಿ ವೃಂದಾವನ- ದೊಳು ಮೆರಸುವ ಮುಂದಿನ ಸೊಬಗ ಪಂಥದಿ ವೀರಶೈವರ ಗುರುವನೆ ಗೆದ್ದು ಹತ್ತಿದೆ ಮುತ್ತಿನ ದಿವ್ಯ ಪೀಠವನು ||1|| ಕುಂಡಿನೇಶನ ತನುಜಾತೆಯ ಪತ್ರವ ಪುಂಡರೀಕಾಕ್ಷನಿಗರ್ಪಿಸಿದ್ಯಲ್ಲೋ ಮದುವೆಯ ಸಮಯದಿ ಶಪಥದಿಂದಲಿ ಬಂದು ವಧುವಿನ ಭಾಗ್ಯವನುಳಿಸಿದೆಯಲ್ಲೋ ||2|| ಅರಿತುಂಡು ವಿಷವ ನೀನರಗಿಸಿಕೊಂಡ್ಯಲ್ಲೊ ನರಪತಿತನಯನ ಬದುಕಿಸಿದ್ಯಲ್ಲೋ ಭಜಿಸುತ ರಾಜೇಶ ಹಯಮುಖನಂಘ್ರಿಯ ತ್ರಿಜಗದೊಳಧಿಕ ಸೋದಾಪುರದೊಳು ನಿಂದ್ಯೋ ||3||

Transliteration

Bavisamira guru sri vadiraja Nimma sevipa janarigabishtavaniva ||pa|| Hanuma bima madhvarodagudi vrundavana- Dolu merasuva mundina sobaga Panthadi virasaivara guruvane geddu Hattide muttina divya pithavanu ||1|| Kundinesana tanujateya patrava Pundarikakshanigarpisidyallo Maduveya samayadi Sapathadindali bandu Vadhuvina bagyavanulisideyallo ||2|| Aritundu vishava ninaragisikondyallo Narapatitanayan…